Hi Friends,
I was born on 26th January 2018 in some youngsters heart. On that day, at KHPS Shahabandar premises; school teachers and students, villagers alongwith job holders in various Government sectors are present to Republic Day celebration. As celebrated previous year, the students were starts the parade, march-past from old school building to new school building via successful flag hosting at Shree kamaladevi temple, Urdu primary school and Gram panchayat.The march-past and parade ends at KHPS new school premises and all teachers of both schools, Gram Panchayat members, villagers, youths of the village who are presently working in various Departments like INA, KSRTC, POST, KEB, POLICE, NGO etc. are attended.The strength of the students of both schools (Kannada school and Urdu school) was very poor, means around 150 only !!!
The maintenance of the school building was also neglected by the SDMC, school staff too.This negligence of SDMC and staff cuased to anger of the youths in Republic Day celebration, then they were brought to the notice to to the comcerned; but, did not get positive response from them.
Hence the anger youths are gathered at Shree Kamaladevi temple afternoon, discussed the present situation of the school and planned to do some contribution for school in which they were studied. Since few days, some unhealthy developments in village implemented by Gram Panchayat. Youngsters were come to known that, what is going on in our village? thereafter youths were united to avoid all these unhealthy implementations and to enrich the education quality for village children at school. 26 people out of 30 are contribute 10,000/- each and gave birth to me.
I am "Dr. APJ Abdul Kalam Education and Rural Development Society (Regd), Shahabandar"
ಗೆಳೆಯರೇ,
ನಾನು ಜನವರಿ 26, 2018 ರಂದು ಕೆಲವು ಯುವ ಹೃದಯದಲ್ಲಿ ಜನಿಸಿದವನು. ಆ ದಿನ KHPS ಶಹಬಂದರ ಆವರಣದಲ್ಲಿ; ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು, ಗ್ರಾಮದ ವಿವಿಧ ಸರ್ಕಾರಿ ಸರ್ಕಾರೇತರ ಕ್ಷೇತ್ರಗಳಲ್ಲಿನ ನೌಕರರ ಜೊತೆಗೆ ಗ್ರಾಮಸ್ಥರು ಗಣರಾಜ್ಯ ದಿನದ ಆಚರಣೆಗೆ ಸೇರಿದ್ದರು. ಹಿಂದಿನ ವರ್ಷದಂತೆ, ವಿದ್ಯಾರ್ಥಿಗಳು ಮೆರವಣಿಗೆಯನ್ನು ಆರಂಭಿಸಿದರು, ಹಳೆಯ ಶಾಲಾ ಕಟ್ಟಡದಿಂದ ಶ್ರೀ ಕಮಲಾದೇವಿ ದೇವಸ್ಥಾನ, ಉರ್ದು ಪ್ರಾಥಮಿಕ ಶಾಲೆ ಮತ್ತು ಗ್ರಾಮ ಪಂಚಾಯತ್ನಲ್ಲಿ ಯಶಸ್ವಿ ಧ್ವಜಾರೋಹಣ ಮುಗಿಸಿ ಹೊಸ ಶಾಲಾ ಕಟ್ಟಡಕ್ಕೆ ಬಂದರು. ಪಥ ಸಂಚಲನ ಮತ್ತು ಮೆರವಣಿಗೆ ಮುಗಿದು, ಎಲ್ಲಾ ಎರಡೂ ಶಾಲೆಯ ಶಿಕ್ಷಕರು, ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮಸ್ಥರು, INA, KSRTC, POST, KEB, POLICE NGO ಮುಂತಾದ ವಿವಿಧ ಇಲಾಖೆಗಳಲ್ಲಿ ಪ್ರಸ್ತುತವಾಗಿ ಕಾರ್ಯನಿರ್ವಹಿಸುತ್ತಿರುವ ಗ್ರಾಮದ ನೌಕರಸ್ತ ಯುವಕರು ಭಾಗವಹಿಸಿದ್ದರು. ಎರಡೂ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆ(ಕನ್ನಡ ಶಾಲೆ ಮತ್ತು ಉರ್ದು ಶಾಲೆ ) ಬಹಳ ಕಳಪೆಯಾಗಿತ್ತು. ಅಂದರೆ ಸುಮಾರು 150 ಮಾತ್ರ ಇತ್ತು !!!
SDMC ಮತ್ತು ಶಾಲಾ ಸಿಬ್ಬಂಧಿಯವರಿಂದ ನಿರ್ಲಕ್ಷ್ಯಕ್ಕೆ ತುತ್ತಾಗಿತ್ತು. SDMC ಯ ಈ ನಿರ್ಲಕ್ಷ್ಯವು ಗಣರಾಜ್ಯೋತ್ಸವ ದಿನದ ಆಚರಣೆಯಲ್ಲಿನ ಯುವಕರ ಕೋಪಕ್ಕೆ ಕಾರಣವಾಯಿತು. ಸಂಬಂಧಿಸಿದವರಿಗೆ ಗಮನಕ್ಕೆ ತರಲಾಯಿತು; ಆದರೆ, ಅವರಿಂದ ಧನಾತ್ಮಕ ಪ್ರತಿಕ್ರಿಯೆಯನ್ನು ದೊರೆಯಲಿಲ್ಲ.
ಆದ್ದರಿಂದ ಕೋಪಗೊಂಡ ಯುವಕರು ಶ್ರೀ ಕಮಾಲದೇವಿ ದೇವಾಲಯದಲ್ಲಿ ಮಧ್ಯಾಹ್ನದ ಸಮಯದಲ್ಲಿ ಒಟ್ಟುಗೂಡಿ, ಶಾಲೆಯ ಪ್ರಸ್ತುತ ಪರಿಸ್ಥಿತಿಯನ್ನು ಚರ್ಚಿಸಿದರು ಮತ್ತು ಅವರು ಅಧ್ಯಯನ ಮಾಡಿದ ಶಾಲೆಗೆ ಕೆಲವು ಕೊಡುಗೆಗಳನ್ನು ನೀಡಲು ಯೋಚಿಸಿದರು. ಇತ್ತೀಚಿನ ದಿನಗಳಲ್ಲಿ ಗ್ರಾಮದಲ್ಲಿ ಕೆಲವು ಅನಾರೋಗ್ಯಕರ ಬೆಳವಣಿಗೆಗಳನ್ನು ಗ್ರಾಮ ಪಂಚಾಯತ್ ಜಾರಿಗೆ ತಂದದ್ದನ್ನು ಕಂಡು ನಮ್ಮ ಗ್ರಾಮದಲ್ಲಿ ಏನು ನಡೆಯುತ್ತಿದೆ ಎಂದು ಯುವಕರು ತಿಳಿದುಕೊಂಡರು? ಯುವಕರು ಈ ಅನಾರೋಗ್ಯಕರ ಅನುಷ್ಠಾನವನ್ನು ತಪ್ಪಿಸಲು ಮತ್ತು ಶಾಲೆಯಲ್ಲಿ ಗ್ರಾಮದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸಲು ಯೋಜಿಸಿದರು. 30 ರಲ್ಲಿ 26 ಜನರು 10,000 / - ರಷ್ಟು ಕೊಡುಗೆ ನೀಡಿ ನನಗೆ ಜನ್ಮ ನೀಡಿದರು.
ನಾನು ಡಾll ಎ. ಪಿ. ಜೆ ಅಬ್ದುಲ್ ಕಲಾಂ ಶೈಕ್ಷಣಿಕ ಮತ್ತು ಗ್ರಾಮೀನಾಭಿವೃದ್ಧಿ ಸೊಸೈಟಿ (ರಿ), ಶಹಾಬಂದರ

No comments:
Post a Comment